Bellary district Hagari Bommanahalli Bheema Naik and Koppal district Gangavati JDS MLA Iqbal Ansari ready to join Congress. Bheema Naik confirmed that he joins Congress in the month of January.
ಮುಂಬರುವ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಶತಾಗತಾಯವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಗೆ ಹಿನ್ನೆಡೆಯಾಗಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಇಬ್ಬರು ಹಾಲಿ ಜೆಡಿಎಸ್ ಶಾಸಕರು ಈಗಾಗಲೇ ಕಾಂಗ್ರೆಸ್ ಬಾಗಿಲಿಗೆ ಹೋಗಿ ನಿಂತಿದ್ದು, ಮುಂದಿನ ತಿಂಗಳು (ಜನವರಿ) ಕಾಂಗ್ರೆಸ್ ಮನೆ ಪ್ರವೇಶಿಸುವುದು ಪಕ್ಕಾ ಆಗಿದೆ.ಹೌದು..ಸ್ವತಃ ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಎಸ್.ಭೀಮಾನಾಯ್ಕ ಜನವರಿಯಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಗುರುವಾರ ಕೊಟ್ಟೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಇನ್ನೋರ್ವ ಗಂಗಾವತಿಯ ಜೆಡಿಎಸ್ ಬಂಡಾಯ ಶಾಸಕ ಇಕ್ಬಾಲ್ ಅನ್ಸಾರಿ ಈಗಾಗಲೇ ಪಕ್ಷದಿಂದ ಎರಡು ಕಾಲು ಹೊರಗಿಟ್ಟಿದ್ದು, ಅಧಿಕೃತವಾಗಿ ಜನವರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಇವೆರಡು ಗೆಲ್ಲುವ ಕುದುರೆಗಳಾಗಿದ್ದು, 2018ರ ಚುನಾವಣೆಯಲ್ಲಿ ಜೆಡಿಎಸ್ ಗೆ ಎರಡು ಸ್ಥಾನಗಳು ಕೈತಪ್ಪಲಿವೆ.ಇದನ್ನು ಮನಗಂಡಿರುವ ದೇವೇಗೌಡ್ರು ಇತ್ತೀಚೆಗೆ ಬಳ್ಳಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸ ದಾಳ ಉರುಳಿಸಿ ಬಂದಿದ್ದರು.